ನೆಫ್ರೋ-ಯುರಾಲಜಿ ಸಂಸ್ಥೆಯು, ಮೂತ್ರಪಿಂಡ ಮತ್ತು ಮೂತ್ರಕೋಶ ಖಾಯಿಲೆಗಳಿಗೆ ಚಿಕಿತ್ಸೆ ನೀಡುವಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕ ಸರ್ಕಾರದ ಒಂದು ಸ್ವಾಯತ್ತ ಸಂಸ್ಥೆಯಾಗಿದ್ದು, ಕರ್ನಾಟಕ ಸೊಸೈಟಿಗಳ ನೋಂದಣಿ ಅಧಿನಿಯಮಗಳು 1960ರ ಮೇರೆಗೆ ದಿನಾಂಕ: 19.01.2004 ರಂದು ನೋಂದಾಯಿಸಲ್ಪಟ್ಟಿದೆ. ಲಾಭ ಗಳಿಸುವ ಉದ್ದೇಶವಿಲ್ಲದೆ, ಸರ್ಕಾರದ ಅನುದಾನದ ನೆರವಿನಿಂದ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿರುವ, ಈ ಹಿಂದೆ ಕಾರ್ಯನಿರ್ವಹಿಸಿ ತೆರವು ಮಾಡಿರುವ ಶ್ರೀ ಜಯದೇವ ಹೃದ್ರೋಗ ಸಂಸ್ಥೆಯ ಕಟ್ಟಡದಲ್ಲಿ ರೂಪುಗೊಂಡಿದ್ದು, ದಿನಾಂಕ 09.04.2007ರಿಂದ ಸಾರ್ವಜನಿಕರಿಗೆ ಸೇವೆಯನ್ನು ಒದಗಿಸುತ್ತಿದೆ.